ಯಾನ 2019 ರ ಕನ್ನಡ ಭಾಷೆಯ ಚಲನಚಿತ್ರವಾಗಿದ್ದು, ವಿಜಯಲಕ್ಷ್ಮಿ ಸಿಂಗ್ ಬರೆದು ನಿರ್ದೇಶಿಸಿದ್ದಾರೆ, ಐ ಎಂಟರ್‌ಟೈನ್‌ಮೆಂಟ್ ಮತ್ತು ಎಸಿಎಂಇ ಮೂವೀಸ್ ಇಂಟರ್‌ನ್ಯಾಶನಲ್ ಪ್ರೊಡಕ್ಷನ್‌ನ ಬ್ಯಾನರ್‌ಗಳ ಅಡಿಯಲ್ಲಿ ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ನಿರ್ಮಿಸಿದ್ದಾರೆ. ಚಿತ್ರಕ್ಕೆ ಜೋಶ್ವಾ ಶ್ರೀಧರ್ ಮತ್ತು ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಚಿತ್ರವು ವೈಭವಿ, ವೈನಿಧಿ, ವೈಸಿರಿ, ಸುಮುಖ, ಚಕ್ರವರ್ತಿ ಮತ್ತು ಅಭಿಷೇಕ್ ಇವರುಗಳನ್ನು ಪರಿಚಯಿಸುತ್ತಿದೆ. ಇತರ ಪಾತ್ರಗಳಲ್ಲಿ ಸುಹಾಸಿನಿ, ಸಾಧು ಕೋಕಿಲ, ಚಿಕ್ಕಣ್ಣ, ರಂಗಾಯಣ ರಘು ಮತ್ತು ಅನಂತ್ ನಾಗ್ ಇದ್ದಾರೆ . ಚಿತ್ರವು ತಮ್ಮ ಮಾನಸಿಕ ಒತ್ತಡವನ್ನು ನಿವಾರಿಸಲು ಗೋವಾಕ್ಕೆ ರಸ್ತೆ ಪ್ರವಾಸ ಮಾಡಲು ಹದಿಹರೆಯದ ಕಾಲೇಜುವಿದ್ಯಾರ್ಥಿಗಳಾದ ಮಾಯಾ (ವೈಭವಿ ಅಭಿನಯ), ಅಂಜಲಿ (ವೈಸಿರಿ ಅಭಿನಯ), ಮತ್ತು ನಂದಿನಿ (ವೈನಿಧಿ ಅಭಿನಯ) ಅವರ ಕತೆಯನ್ನು ಹೇಳುತ್ತದೆ. ಚಲನಚಿತ್ರವು 12 ಜುಲೈ 2019 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. == ಪಾತ್ರವರ್ಗ == ನಂದಿನಿಯಾಗಿ ವೈನಿಧಿ ಜಗದೀಶ್ ಮಾಯೆಯಾಗಿ ವೈಭವಿ ಜಗದೀಶ್ ಅಂಜಲಿಯಾಗಿ ವೈಸಿರಿ ಜಗದೀಶ್ ಶಿವರಾಜ್ ಕೆ.ಆರ್.ಪೇಟೆ ಅಪೂರ್ವ ಗುರುರಾಜ ಅಪೂರ್ವನಾಗಿ ಅನಂತ್ ನಾಗ್ ಸುಹಾಸಿನಿ ಮಣಿರತ್ನಂ ಸಾಧು ಕೋಕಿಲ ರಂಗಾಯಣ ರಘು ಚಿಕ್ಕಣ್ಣ ಹಂಪ ಅಂಗಡಿ ಸುಮುಖ ಅಭಿಷೇಕ್ == ಬಿಡುಗಡೆ == ಚಿತ್ರದ ಅಧಿಕೃತ ಟ್ರೈಲರ್ ಅನ್ನು ಲಹರಿ ಸಂಗೀತ ಕಂಪನಿಯು ಜೂನ್ 2019 27 ರಂದು ಬಿಡುಗಡೆ ಮಾಡಿತು == ಹಿನ್ನೆಲೆಸಂಗೀತ == ಜೋಶುವಾ ಶ್ರೀಧರ್ ಮತ್ತು ಅನೂಪ್ ಸೀಳಿನ್ ಧ್ವನಿಪಥವನ್ನು ಸಂಯೋಜಿಸಿದ್ದಾರೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಯಾನ @ ಐ ಎಮ್ ಡಿ ಬಿ